Federal Bank Scholarship-ಫೆಡರಲ್ ಬ್ಯಾಂಕ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅವಕಾಶ!
2025-2026 ನೇ ಸಾಲಿನ ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಫೆಡರಲ್ ಬ್ಯಾಂಕಿ ಅಡಿಯಲ್ಲಿ 1ಲಕ್ಷ ವಿದ್ಯಾರ್ಥಿವೇತನ(Federal Bank Scholarship) ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿವೇತನವು(Federal Bank Scholarship Application) ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದ್ದು, ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ ರಚನೆಯ ಪ್ರಕಾರ ಬೋಧನಾ ಶುಲ್ಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳ 100% ಮರುಪಾವತಿಯನ್ನು ಪಡೆಯಲು ಅವಕಾಶ ಇರುತ್ತದೆ.
ಈ ಯೋಜನೆಯ ಅಡಿಯಲ್ಲಿ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಒದಗಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಈ ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ? ಇತರ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Federal Bank Scholarship Amount-ಫೆಡರಲ್ ಬ್ಯಾಂಕ್ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?
ಬೋಧನಾ ಶುಲ್ಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳ 100% ಮರುಪಾವತಿ.
ಈ ಮರುಪಾವತಿಯು ಕಾಲೇಜಿನ ಅಧಿಕೃತ ಶುಲ್ಕ ರಚನೆಯನ್ನು ಆಧರಿಸಿದೆ, ಪಿಸಿ/ಲ್ಯಾಪ್ಟಾಪ್ಗೆ ₹40,000 ವರೆಗಿನ ಮರುಪಾವತಿ ಮಾಡಲಾಗುತ್ತದೆ, ₹30,000 ವರೆಗಿನ ಟ್ಯಾಬ್ಲೆಟ್ ಮರುಪಾವತಿ ಮಾಡಲಾಗುತ್ತದೆ.
ಎಲ್ಲಾ ಮರುಪಾವತಿಗಳು ವಾರ್ಷಿಕ ₹1,00,000 ದ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
Federal Bank Scholarship Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಕೊನೆಯ ದಿನಾಂಕ: ಡಿಸೆಂಬರ್ 31 2025
Federal Bank Scholarship Eligibility Criteria-ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಎಂಬಿಬಿಎಸ್, ಬಿಇ/ಬಿ.ಟೆಕ್, ಬಿ.ಎಸ್ಸಿ ಇನ್ ನರ್ಸಿಂಗ್, ಎಂಬಿಎ, ಕೃಷಿಯಲ್ಲಿ ಬಿ.ಎಸ್ಸಿ, ಸಹಕಾರ ಮತ್ತು ಬ್ಯಾಂಕಿಂಗ್ನಲ್ಲಿ ಬಿ.ಎಸ್ಸಿ (ಆನರ್ಸ್) ಪದವಿ ಕೊರ್ಸನಲ್ಲಿ ದಾಖಲಾಗಿರಬೇಕು.
ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು.
2025-26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ/ಸರ್ಕಾರಿ ಅನುದಾನಿತ/ಸರ್ಕಾರಿ ಮಾನ್ಯತೆ ಪಡೆದ ಸ್ವ-ಹಣಕಾಸು/ಸ್ವಾಯತ್ತ ಕಾಲೇಜುಗಳಲ್ಲಿ ಅರ್ಹತೆಯ ಅಡಿಯಲ್ಲಿ ಪ್ರವೇಶ ಪಡೆದಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹3,00,000 ಕ್ಕಿಂತ ಒಳಗಿರಬೇಕು.
Reqiuired Documents For Federal Bank Scholarship-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳವುವು?
ವಿದ್ಯಾರ್ಥಿಯ ಆಧಾರ್ ಕಾರ್ಡ್.
ಪ್ರವೇಶ ಪತ್ರ.
ಆದಾಯ ಪ್ರಮಾಣಪತ್ರ.
ನಿವಾಸಿ ದೃಡೀಕರಣ ಪತ್ರ.
ವೈದ್ಯಕೀಯ ಪ್ರಮಾಣಪತ್ರ(ಅಗತ್ಯವಿದ್ದಲ್ಲಿ).
ಪಾಸ್ಪೋರ್ಟ್ ಸೈಜ್ ಫೋಟೋ.
Federal Bank Scholarship Online Application-ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬಹುದು?
ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.
Step-1: ಆಸಕ್ತ ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ “Click Here” ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.
Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈ ಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.
Step-3: ತದನಂತರ “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
For More Information-ಈ ವಿದ್ಯಾರ್ಥಿವೇತನದ ಬಗ್ಗೆ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here